ಮ್ಯಾಕ್ಸಿಮಿಲಿಯನ್ 1 

 	1459-1519. ಜರ್ಮನಿಯ ಮತ್ತು ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿ. ಚತುರರಾಜಕಾರಣಿ, ಆಡಳಿತಗಾರ ಮತ್ತು ಸಾಹಿತ್ಯಪ್ರಿಯ. 16ನೆಯ ಶತಮಾನದಲ್ಲಿ ಯೂರೋಪಿನಲ್ಲಿ ಹಾಪ್ಸ್ ಬರ್ಗ್ ಮನೆತನದ ಪ್ರಾಬಲ್ಯಕ್ಕೆ ಕಾರಣ ಪುರುಷ. ಚಕ್ರವರ್ತಿ ಮೂರನೆಯ ಫ್ರೆಡರಿಕ್‍ನ ಮೊದಲ ಮಗನಾಗಿ ಆಸ್ಟ್ರಿಯದಲ್ಲಿ 1459 ಮಾರ್ಚ್ 22 ರಂದು ಜನಿಸಿದ. 1477ರಲ್ಲಿ ಬರ್ಗಂಡಿಯ ಡ್ಯೂಕ್‍ನ ಮಗಳಾದ ಮೇರಿಯನ್ನು ವಿವಾಹವಾಗಿ ಫ್ರಾನ್ಸಿನ ಪೂರ್ವ ಗಡಿಭಾಗ ಮತ್ತು ನೆದರ್ ಲ್ಯಾಂಡಿನಲ್ಲಿ ಹರಡಿದ್ದ ಬರ್ಗಂಡಿಯ ವಿಶಾಲ ಭಾಗವನ್ನು ಪಡೆದುಕೊಂಡ. 1479ರಲ್ಲಿ ಫ್ರಾನ್ಸಿನೊಡನೆ ಕಾದು ಜಯಗಳಿಸಿದ. 1482ರಲ್ಲಿ ಮೇರಿ ತೀರಿಕೊಂಡಳು. ಇದೇ ವರ್ಷದಲ್ಲಿ ಫ್ರಾನ್ಸಿನೊಡನೆ ಆದ ಅರಸ್ ಒಪ್ಪಂದದ ಪ್ರಕಾರ ತನ್ನ ಮಗಳಾದ ಮಾರ್ಗರೇಟಳನ್ನು ಫ್ರಾನ್ಸಿನ 8ನೆಯ ಚಾಲ್ರ್ಸ್‍ಗೆ ವಿವಾಹ ಮಾಡಿಕೊಡಲು ಒಪ್ಪಬೇಕಾಯಿತು. 1486ರಲ್ಲಿ ಇವನನ್ನು ರೋಮನ್ನರ ದೊರೆಯೆಂದು ಘೋಷಿಸಿ ಇದೇ ವರ್ಷ ಏಪ್ರಿಲ್ 9ರಂದು ಪಟ್ಟಾಭಿಷೇಕ ನಡೆಸಲಾಯಿತು. ಫ್ರಾನ್ಸಿನೊಡನೆ ಕದನ ಮುಂದುವರಿಯಿತು. ಆದರೆ ಮಾರ್ಗರೇಟಳನ್ನು ಫ್ರಾನ್ಸಿನ ದೊರೆ ಹಿಂದಕ್ಕೆ ಕಳಿಸಿದಾಗ ಮ್ಯಾಕ್ಸಿಮಿಲಿಯನ್ ಯುದ್ಧ ಮುಂದುವರಿಸಲು ಹಿಂತೆಗೆದ; 1490ರಲ್ಲಿ ಹಂಗರಿಯಿಂದ ತಮ್ಮ ಮನೆ ತನಕ್ಕೆ ಸೇರಿದ್ದ ಭಾಗಗಳನ್ನು ಪಡೆದ. ಮುಂದೆ 1491ರ ಪೆಸ್‍ಬರ್ಗ್ ಒಪ್ಪಂದ ದಂತೆ ಹಂಗರಿಯ ರಾಜನಿಗೆ ವಾರಸುದಾರರು ಇಲ್ಲದಾಗ ಆ ರಾಜ್ಯವೆಲ್ಲ ಹಾವ್ಸ್ ಬರ್ಗ್ ಮನೆತನಕ್ಕೆ ಸೇರಬೇಕೆಂದಾಯಿತು. 1495ರಲ್ಲಿ ಫ್ರಾನ್ಸಿನ ವಿರುದ್ಧ ಹೋಲಿಲೀಗ್‍ನ ಸ್ಟೇನ್, ವೆನಿಸ್ ಮತ್ತು ಮಿಲಾನ್ ಇವುಗಳ ಜೊತೆಗೂಡಿದ. ಸ್ಪೇನಿನ ರಾಜಕುಮಾರನಿಗೆ ತನ್ನ ಮಗಳು ಮಾರ್ಗರೇಟಳನ್ನು ಕೊಟ್ಟು ವಿವಾಹಮಾಡಿದನಲ್ಲದೆ ತನ್ನ ಮಗ ಫಿಲಿಪನಿಗೆ ಸ್ಪೇನಿನ ರಾಜಕುಮಾರಿಯನ್ನೂ ತಂದುಕೊಂಡು ತನ್ನ ರಾಜ್ಯದಲ್ಲಿ ಸಾಮಾಜಿಕ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಮಾಡಿ. 1499ರಲ್ಲಿ ನಡೆದ ಯುದ್ಧದಲ್ಲಿ ಜಯಗಳಿಸಲಾರದೆ ಹೋಗಿ ಸ್ವಿಟ್‍ಜóರ್‍ಲೆಂಡಿಗೆ ಸ್ವಾತಂತ್ರ್ಯ ನೀಡಿದ. 1513ರಲ್ಲಿ ಇಂಗ್ಲೆಂಡಿನ ಸಹಾಯದೊಡನೆ ಸ್ಪರ್ಸ್‍ಯುದ್ಧದಲ್ಲಿ ಫ್ರಾನ್ಸ್‍ನ್ನು ಸೋಲಿಸಿದ. ತನ್ನ ಮೊಮ್ಮಗ ಚಾಲ್ರ್ಸ್‍ನನು ಚಕ್ರವರ್ತಿಯಾಗಿ ಮಾಡಲು ಈತ ಪ್ರಯತ್ನಿಸಿದ. ಮುಂದೆ ಇದರ ಫಲವಾಗಿ ಮೊದಲೇ ಸ್ಪೇನಿನ ದೊರೆಯಾಗಿದ್ದ ಇವನ ಮೊಮ್ಮಗ 1519ರಲ್ಲಿ ಚಕ್ರವರ್ತಿಯಾಗಿ 5ನೆಯ ಚಾಲ್ರ್ಸ್ ಎಂದು ಹೆಸರಾದ..

	ಹೊಸಭಾವನೆಗಳನ್ನು, ಹೊಸ ಯೋಜನೆಗಳನ್ನು ಮ್ಯಾಕ್ಸಿಮಿಲಿಯನ್ ಹೊಂದಿದ್ದು ತನ್ನ ರಾಜ್ಯದಲ್ಲಿ ಸಾಧ್ಯವಾದಷ್ಟು ಸುಧಾರಣೆಗಳನ್ನು ಮಾಡಿ ಪ್ರಸಿದ್ಧನಾದ. ವಿe್ಞÁನ, ಕಲೆಗೆ ಸಾಕಷ್ಟು ಪ್ರೊತ್ಸಾಹನೀಡಿದ. ತನ್ನ ಜೀವನಚರಿತ್ರೆ ಕುರಿತಂತೆ ಮತ್ತು ಬೇಟೆ ಕುರಿತಂತೆ ಗ್ರಂಥಗಳನ್ನು ರಚಿಸಿದ್ದಾನೆ. ಮ್ಯಾಕ್ಸಿ ಮಿಲಿಯನ್ 1519 ಜನವರಿ 12ರಂದು ತೀರಿಕೊಂಡ.													
 (ಬಿ. ಎಸ್. ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ